ವಳಲಹಳ್ಳಿ ಗ್ರಾಪಂ ಅಧ್ಯಕ್ಷರಿಂದ ಹಣ ದುರುಪಯೋಗ ಆರೋಪ
Nov 30 2024, 12:46 AM ISTವಳಲಹಳ್ಳಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರು ಕಾಮಗಾರಿ ಹೆಸರಿನಲ್ಲಿ ತಮ್ಮ ಕುಟುಂಬದ ಸದಸ್ಯರ ಹೆಸರಿಗೆ ಹಣ ಮಂಜೂರು ಮಾಡಿಸಿಕೊಂಡಿದ್ದು, ಇದು ಸಾಬೀತಾಗಿದೆ. ಹಾಗಾಗಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಸದಸ್ಯರೆಲ್ಲರೂ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ಗ್ರಾ.ಪಂ ಸದಸ್ಯ ವಳಲಹಳ್ಳಿ ಸುದರ್ಶನ್ ಹೇಳಿದರು. ಇನ್ನೊಂದು ವಾರದ ಒಳಗೆ ಅಧ್ಯಕ್ಷರು ರಾಜೀನಾಮೆ ಕೊಡದಿದ್ದಲ್ಲಿ ನಾವೇ ರಾಜೀನಾಮೆ ಕೊಡುತ್ತೇವೆ ಎಂದರು. ಅಧ್ಯಕ್ಷರು ರಾಜೀನಾಮೆ ನೀಡುವ ಮುಖಾಂತರ ನಮಗೆ ಸಹಕರಿಸಲಿ ಎಂದರು.