ಪೌಷ್ಟಿಕ ಆಹಾರ ಸೇವನೆ ಸದೃಢ ಆರೋಗ್ಯಕ್ಕೆ ಪೂರಕ
Sep 26 2024, 10:20 AM ISTಗೌರಿಬಿದನೂರು: ಹಸಿರು ಎಲೆಗಳ ತರಕಾರಿಗಳು ಎಲ್ಲಾ ಮುಖ್ಯ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು, ಬೆಳವಣಿಗೆಗೆ ಮತ್ತು ಉತ್ತಮ ಆರೋಗ್ಯಕ್ಕೆ ಅತ್ಯವಶ್ಯಕ. ಭಾರತದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಸಿರು ಎಲೆ ತರಕಾರಿಗಳನ್ನು ತಿನ್ನಲಾಗುತ್ತದೆ. ಅದರಲ್ಲಿ ಜನಪ್ರಿಯವಾದವೆಂದರೆ ಪಾಲಕ್ ಸೊಪ್ಪು, ದಂಟಿನ ಸೊಪ್ಪು, ಪುಂಡಿಪಲ್ಯ , ಮೆಂತ್ಯೆ ಸೊಪ್ಪು, ನುಗ್ಗೆ ಸೊಪ್ಪು, ಪುದೀನ ಸೊಪ್ಪುಗಳಾಗಿವೆ. ನಿತ್ಯ ಪೌಷ್ಟಿಕ ಅಹಾರ ಸೇವನೆಯಿಂದ ನಮ್ಮ ದೇಹ ಸದೃಢವಾಗಿರಲು ಸಾಧ್ಯ, ಈ ನಿಟ್ಟಿನಲ್ಲಿ ತಾಜಾ ಹಣ್ಣು, ತರಕಾರಿ ಸೇವಿಸಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ತಿಳಿಸಿದರು.