ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸನ್ನದ್ಧರಾಗಿ: ಎನ್.ಎಚ್.ನಾಗೂರ

Jan 26 2024, 01:49 AM IST
ಆಲಮಟ್ಟಿ: ಏಕಾಗ್ರತೆ, ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸನ್ನದ್ಧರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್.ನಾಗೂರ ಹೇಳಿದರು. ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹರ್ಡೇಕರ್ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದರು. ಇದು ನನ್ನ ಏಳಿಗೆ, ನನ್ನ ಪ್ರಗತಿ, ನನ್ನ ಜ್ಞಾನ ಎಂದು ನಿಮ್ಮ ಸಾಮರ್ಥ್ಯ ಓರೆಗಲ್ಲಿಗೆ ಹಚ್ಚಿ. ಶಿಕ್ಷಣದಲ್ಲಿ ವಿಶೇಷ ಪ್ರಗತಿ ಕಾಣಬೇಕು. ಇದರಿಂದ ಯಶಸ್ಸು ತಮ್ಮದಾಗುತ್ತದೆ. ಸ್ಪಷ್ಟ ಓದು, ಬರಹದ ಪ್ರಭುತ್ವತೆಯೇ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಪಡಿಸಿದರು.