ಇಂದು “ಸಮಾಧಾನ” ಕಟ್ಟಡ ಗುರು ಪ್ರವೇಶ ಕಾರ್ಯಕ್ರಮ

Feb 11 2024, 01:46 AM IST
ಸೊರಬ ತಾಲೂಕಿನ ವರದಾ ಮತ್ತು ದಂಡಾವತಿ ನದಿಗಳ ಸಂಗಮ ಕ್ಷೇತ್ರ ಬಂಕಸಾಣ ಗ್ರಾಮದಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ “ಸಮಾಧಾನ” ಕಟ್ಟಡದ ಗುರುಪ್ರವೇಶ ಸಮಾರಂಭ ಫೆ.11ರಂದು ಜರುಗಲಿದೆ ಎಂದು ಜಡೆ ಹಿರೇಮಠ ಮತ್ತು ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ. 3 ಎಕರೆ ನಿವೇಶನದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಫೆ.11ರಂದು ಬೆಳಗ್ಗೆ 8 ಗಂಟೆಗೆ ಮೌನತಪಸ್ವಿ ಶಾಂತಲಿಂಗ ಮಹಾಶಿವಯೋಗಿಗಳು ಜಂಗಮ ಪೂಜೆ ನಂತರ, 10 ಗಂಟೆಗೆ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದಪ್ಪ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಗುರು ಪ್ರವೇಶ ನಡೆಯಲಿದೆ ಎಂದಿದ್ದಾರೆ.