ಕಲಬುರಗಿ: ನಾಳೆ ಎಂಆರ್ ಮೆಡಿಕಲ್ ಕಾಲೇಜು ಎಸ್ಎಸಿ ಕಟ್ಟಡ ಉದ್ಘಾಟನೆ
Jan 26 2024, 01:47 AM ISTಮಹಾದೇವಪ್ಪ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಗೂ ಬೋಧನಾ ಸಿಬ್ಬಂದಿ ವೈದ್ಯಕೀಯ ಶಿಕ್ಷಣ ಸಂಬಂಧಿತ ಕಾರ್ಯಚಟುವಟಿಕೆಗಳಿಗೆ ಈ ನೂತನ ಕೇಂದ್ರ ಮೀಸಲಾಗಿರಲಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಾನುಸಾರ ನಿರ್ಮಿಸಲ್ಪಟಿರುವ ಈ ಕೇಂದ್ರದಲ್ಲಿ ಎಲ್ಲ ವಿವಿಧ ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವರ್ಷದುದ್ದಕ್ಕೂ ನಡೆಯಲಿವೆ ಎಂದು ಡಾ.ಬಿಲಗುಂದಿ ವಿವರಿಸಿದರು.