ಮಲೆನಾಡು ಬಳಿಕ ಕರಾವಳಿ ಅಡಕೆ ತೋಟಗಳಿಗೆ ಕಾಲಿಟ್ಟ ನುಸಿ ಪೀಡೆ ಬಾಧೆ!
Apr 12 2024, 01:02 AM ISTಕಳೆದ ಒಂದು ತಿಂಗಳಿಂದ ದ.ಕ.ಜಿಲ್ಲೆಯ ಪುತ್ತೂರು, ಸುಳ್ಯ ಭಾಗಗಳ ಅಡಕೆ ತೋಟಗಳಲ್ಲಿ ಅಡಕೆ ಸೋಗೆ ದಿಢೀರ್ ಒಣಗುತ್ತಿದೆ. ಬಳಿಕ ಸೋಗೆ ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿ ಒಂದೆರಡು ದಿನದಲ್ಲಿ ಸಾಯುತ್ತದೆ. ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಫಸಲು ನಷ್ಟ ಭೀತಿ ಅಡಕೆ ಬೆಳೆಗಾರರನ್ನು ಆವರಿಸಿದೆ.