ನಮ್ಮ ವಿರುದ್ಧ ಕಾನೂನು ಹೋರಾಟ ಮಾಡಿದರೆ ನಾವು ರೆಡಿ
Aug 25 2024, 01:58 AM ISTಸಂಪರ್ಕ, ಸಂವಹನದ ಕೊರತೆಯಿಂದ ಜೆಡಿಎಸ್ ನಾಯಕರು, ನಮ್ಮ ನಡುವೆ ಅಂತರ ಇದೆ. ವಿಶ್ವಾಸ ಕಡಿಮೆಯಾಗಿದೆ ಎಂದ ಅವರು, ನಮ್ಮ ನೈತಿಕತೆ ಬಗ್ಗೆ ಮಾತನಾಡುವ ಸಂತೋಷ್, ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರ ಸರ್ಕಾರವನ್ನು ಕೆಡವಿದ್ದು ಯಾರು ಎಂಬುದನ್ನು ಹೇಳಲಿ ಎಂದು ಆಗ್ರಹಿಸಿದರು. ಬಿಜೆಪಿಯಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಒಂದೇ ದಿನದಲ್ಲಿ ಜೆಡಿಎಸ್ಗೆ ಬಂದವರಲ್ಲಿ ಯಾವ ಸಿದ್ಧಾಂತ ಇದೆ. ನಮ್ಮ ವಿರುದ್ಧ ಅವರು ಕಾನೂನು ಹೋರಾಟ ಮಾಡಿದರೆ ನಾವೂ ಹೋರಾಟ ಮಾಡುತ್ತೇವೆ ಎಂದು ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಅರಸೀಕೆರೆ ನಗರಸಭೆ ನೂತನ ಅಧ್ಯಕ್ಷ ಸಮೀವುಲ್ಲಾ ವಾಗ್ದಾಳಿ ನಡೆಸಿದರು.