ಕಾನೂನು ಸಮಸ್ಯೆ ಬಗ್ಗೆ ಯಾರೂ ತಿಳಿಸಿಕೊಡಲಿಲ್ಲ: ಶ್ರೀರಾಮ ಭಜನಾ ಮಂಡಳಿ ಸದಸ್ಯ ವಿರೂಪಾಕ್ಷ
Feb 09 2024, 01:46 AM ISTಧ್ವಜಸ್ತಂಭ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ಗ್ರಾಮ ಪಂಚಾಯ್ತಿಗೆ ಅರ್ಜಿ ಸಲ್ಲಿಸಿದ್ದು, ಧ್ವಜಸ್ತಂಭದಲ್ಲಿ ಹನುಮಧ್ವಜ, ರಾಷ್ಟ್ರಧ್ವಜ, ನಾಡಧ್ವಜಗಳನ್ನು ಹಾರಿಸುವುದಾಗಿ ಸ್ಪಷ್ಟವಾಗಿ ತಿಳಿಸಿದ್ದೇವೆ. ಈ ಸಂಬಂಧ ಪಂಚಾಯ್ತಿಯಲ್ಲಿ ಮೂರು ಬಾರಿ ಸಭೆಗಳನ್ನು ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಒಂದು ವೇಳೆ ಪಂಚಾಯ್ತಿಯವರಾಗಲೀ, ಶಾಸಕರಾಗಲೀ ಸರ್ಕಾರಿ ಜಾಗದಲ್ಲಿ ನಿರ್ಮಾಣ ಮಾಡುವುದರಿಂದ ಕಾನೂನಾತ್ಮಕ ತೊಂದರೆಯಾಗಬಹುದು ಅಥವಾ ಹನುಮಧ್ವಜ ಹಾರಿಸುವುದು ಸರಿಯಲ್ಲ ಎಂದು ತಿಳಿಸಿದ್ದರೆ ನಾವು ನಿರ್ಮಾಣ ಮಾಡುತ್ತಿರಲಿಲ್ಲ.