ತಮ್ಮ ಹಕ್ಕುಗಳಿಗಾಗಿ ಕಾರ್ಮಿಕ ದಿನವೇ ಕಾರ್ಮಿಕರ ಹೋರಾಟ
May 02 2025, 01:32 AM IST1 ಮೇ 1886ರಲ್ಲಿ ಅಮೇರಿಕಾದ ಮಾರುಕಟ್ಟೆಯಲ್ಲಿ 8 ಗಂಟೆ ದುಡಿಮೆಗಾಗಿ ಕಾರ್ಮಿಕರು ಪ್ರಾರಂಭಿಸಿದ ಹೋರಾಟ, ಇಡೀ ಜಗತ್ತಿನಾದ್ಯಂತ ಬಂಡವಾಳಶಾಹಿ ಮಾಲೀಕರ ಎದೆಯಲ್ಲಿ ನಡುಕ ಹುಟ್ಟಿಸಿತು. ಹೋರಾಟದಲ್ಲಿ ಅದೆಷ್ಟೋ ಕಾರ್ಮಿಕ ಮುಖಂಡರನ್ನು ಹಾಗೂ ಕಾರ್ಮಿಕರನ್ನು ಕಗ್ಗೊಲೆ ಮಾಡಲಾಯಿತು. ರಸ್ತೆಗಳಲ್ಲಿ ಕಾರ್ಮಿಕ ರಕ್ತವು ಹರಿದು, ಬಿಳಿ ಧ್ವಜವು ಕೆಂಪು ಧ್ವಜವಾಯಿತು. ಅಂದಿನಿಂದ ಕೆಂಪು ಧ್ವಜವು ಕಾರ್ಮಿಕ ಹೋರಾಟದ ಸಂಕೇತವಾಯಿತು.