ಕಲ್ಲುಗಣಿಗಾರಿಕೆ ವೇಳೆ ಅವಘಡ ಕಾರ್ಮಿಕ ಸಾವು
Jun 07 2025, 01:33 AM ISTಶಾಂತಿಗ್ರಾಮ ಹೋಬಳಿಯ ದುಮ್ಮಗೆರೆ ಗ್ರಾಮದಲ್ಲಿ ಬಂಡೆ ದೇವರಾಜು ಎಂಬುವವರಿಗೆ ಸೇರಿದ ನವ್ಯಶ್ರೀ ಗ್ರಾನೈಟ್ ಕಲ್ಲು ಕ್ವಾರಿಯಲ್ಲಿ ಜೂನ್ 5ರ ಬೆಳಗ್ಗೆ ಸಂಭವಿಸಿದ ಅವಘಡದಲ್ಲಿ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಗಣಿ ಸ್ಫೋಟ ಪ್ರಕರಣ ಸಂಬಂಧಪಟ್ಟಂತೆ ಮಣಿ ಎಂಬ ಕಾರ್ಮಿಕ ಸಾವನ್ನಪ್ಪಿದ್ದು, ಉಳಿದ ನಾಲ್ಕು ಮಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.