ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗಲಿ
Dec 22 2023, 01:30 AM ISTಹಿಂದಿನ ಕಾಲದಲ್ಲಿ ಜಾನಪದ ಕಲೆ ಜನರ ನಾಡಿ ಮಿಡಿತವಾಗಿತ್ತು . ಆ ಕಾಲದಲ್ಲಿ ಜನರು ತಮ್ಮ ನಿತ್ಯದ ಕೆಲಸವನ್ನು ಹಾಡುತ್ತಾ ಮಾಡುತ್ತಿದ್ದರು. ಒಂದೊಂದು ಕೆಲಸಕ್ಕೂ ಒಂದೊಂದು ಹಾಡನ್ನು ಕಟ್ಟಿ ಹಾಡುತ್ತಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಜನಪದ ಸಂಸ್ಕೃತಿ, ಕಲೆ, ಸಾಹಿತ್ಯ ಮರೆಯಾಗುತ್ತಿರುವುದು ಅತ್ಯಂತ ವಿಷಾದ ಸಂಗತಿ.