ದೇವೇಗೌಡರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಅವರು ದೊಡ್ಡವರು, ಅವರಿಗೆ ಸರಿಯಾದ ಮಾಹಿತಿ ಇಲ್ಲದೆ ಆ ರೀತಿ ಹೇಳಿದ್ದಾರೆ ಎಂದೆನಿಸುತ್ತಿದೆ. ಅವರಿಂದ ಅಂತಹ ಹೇಳಿಕೆಯನ್ನು ನಾನು ನಿರೀಕ್ಷೆ ಮಾಡಿರಲಿಲ್ಲ.
ರಾಜ್ಯದಲ್ಲಿ ಕೇವಲ ಏಳೆಂಟು ತಿಂಗಳಿನಲ್ಲೇ ಜನರಿಂದ ತಿರಸ್ಕಾರ ಮನೋಭಾವಕ್ಕೆ ಈಡಾಗಿರುವ ಕಾಂಗ್ರೆಸ್ ಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ರಾಜ್ಯದಲ್ಲಿ 28 ಸ್ಥಾನಗಳೂ ಸಹ ಎನ್ ಡಿಎ ಪಾಲಾಗಲಿವೆ ಎಂದು ಗೋಪಾಲಯ್ಯ ಭವಿಷ್ಯ ನುಡಿದರು.
ರೈತರ ಬದುಕು ಹಾಳಾಗಿದೆ. ಬೆಳೆಯಲು ಸರಿಯಾದ ವ್ಯವಸ್ಥೆ ಇಲ್ಲ. ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಹೋಗಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದರೂ ಸಾಕಷ್ಟು ಸಮಸ್ಯೆಗಳಿವೆ. ಚುನಾವಣಾ ಸಂದರ್ಭದಲ್ಲಿ ಬಂದು ಮತ ಹಾಕುತ್ತಿದ್ದಾರೆ. ಇಂತಹ ಮತಗಳನ್ನು ಪಡೆದ ನೀವು ಈ ಜನರ ಬದುಕಿಗೆ ಏನೆಲ್ಲಾ ಸೌಲಭ್ಯ ಕಲ್ಪಿಸಿದ್ದೀರಿ.
ಸಮೀಕ್ಷೆಯಿಂದ 15 ಕ್ಕಿಂತಲೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ಸಮೀಕ್ಷಾ ವರದಿ ಹೊರಬಿದ್ದ ನಂತರ ಅವರಿಗೆ ಸೋಲಿನ ಹತಾಶೆ ಕಾಡಲಾರಂಭಿಸಿದೆ. ದಲಿತರು, ಹಿಂದುಳಿದವರು, ಕಾಂಗ್ರೆಸ್ ಪರವಾಗಿದ್ದಾರೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಹೋಗಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ.