ಧರ್ಮಸ್ಥಳ ಅಪಪ್ರಚಾರ ಖಂಡಿಸಿ ನಾಳೆ ಜೆಡಿಎಸ್ ಸತ್ಯ ಯಾತ್ರೆ
Aug 30 2025, 01:01 AM ISTಜಾತಿ, ಧರ್ಮ, ಪಕ್ಷ ಎಲ್ಲವನ್ನು ಮೀರಿ ರಾಜ್ಯದ ಸಮಸ್ತ ಜನತೆ ಪೂಜಿಸುವ ಧರ್ಮಸ್ಥಳದ ಶ್ರದ್ಧಾಕೇಂದ್ರದ ಬಗ್ಗೆ ಕೆಲವು ಕಾಣದ ಕೈಗಳು ಅಪಪ್ರಚಾರ ನಡೆಸುತ್ತಿರುವುದನ್ನು ಜೆಡಿಎಸ್ ಪಕ್ಷ ತೀವ್ರವಾಗಿ ಖಂಡಿಸುತ್ತಿದೆ. ಪವಿತ್ರ ತೀರ್ಥ ಕ್ಷೇತ್ರದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ನಮ್ಮ ಪಕ್ಷದಿಂದ ಆ. 31ರಂದು ಧರ್ಮಸ್ಥಳ ಸತ್ಯ ಯಾತ್ರೆ ನಡೆಯಲಿದ್ದು, ಗದಗ ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಎಂ.ವೈ.ಮುಧೋಳ ಹೇಳಿದರು.