ಪುಷ್ಪ ಮಂಡಳಿ ಸ್ಥಾಪನೆಗೆ ಸಂಸದ ಡಾ.ಕೆ.ಸುಧಾಕರ್ ಒತ್ತಾಯ
Jul 04 2024, 01:00 AM ISTಪುಷ್ಪ ಮಂಡಳಿ ಸ್ಥಾಪನೆಯಿಂದ ರಾಷ್ಟ್ರದಾದ್ಯಂತ ಪುಷ್ಪ ಕೃಷಿಗೆ ಉತ್ತೇಜನ ದೊರೆತು, ಕರ್ನಾಟಕ ಹಾಗೂ ಎಲ್ಲ ರಾಜ್ಯಗಳ ರೈತರಿಗೂ ಪ್ರಯೋಜನವಾಗಲಿದೆ. ಚಿಕ್ಕಬಳ್ಳಾಪುರದ ಸ್ಥಳೀಯ ನಿವಾಸಿಯೇ ಆಗಿರುವ ಡಾ.ಕೆ.ಸುಧಾಕರ್, ತಾವು ಈ ಪ್ರದೇಶದಲ್ಲಿ ರೈತರ ಬದುಕಿನ ಗುಣಮಟ್ಟ ಸುಧಾರಿಸುವ ಹಾಗೂ ವಿಶಿಷ್ಟ ಕೃಷಿ ಪದ್ಧತಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದು, ಪುಷ್ಪ ಕೃಷಿ ಕೂಡ ಪರಿಣಾಮಕಾರಿ ಪದ್ಧತಿಯಾಗಿದೆ ಎಂದು ತಿಳಿಸಿದ್ದಾರೆ.