ದಕ್ಷಿಣ ಕನ್ನಡದಲ್ಲಿ ಸಾಮರಸ್ಯ ಪುನರ್ ಸ್ಥಾಪಿಸಬೇಕಿದೆ: ಪದ್ಮರಾಜ್
Apr 11 2024, 12:54 AM ISTಮಂಗಳೂರಿನ ಬಿಜೈ ವಾರ್ಡ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ದ.ಕ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್, ಸಾಮರಸ್ಯ ಮರುಸ್ಥಾಪನೆಯ ಜತೆ ಜತೆಗೆ ಜಿಲ್ಲೆಯ ಸರ್ವತೋಮುಖ ಬೆಳವಣಿಗೆ ಆಗಬೇಕಿದೆ. ಪ್ರವಾಸೋದ್ಯಮ ಅಭಿವೃದ್ಧಿ, ಹೂಡಿಕೆಯಿಂದ ಉದ್ದಿಮೆಗಳ ಸ್ಥಾಪನೆ, ಈ ಮೂಲಕ ವಿದ್ಯಾವಂತರಿಗೆ ಜಿಲ್ಲೆಯೊಳಗೆ ಉದ್ಯೋಗ ಸೃಷ್ಟಿ ಮಾಡಬೇಕಿದೆ ಎಂದರು.