ದೆಹಲಿ ಮಾದರಿ ವ್ಯಾಪಾರ ವಲಯ ಅಭಿವೃದ್ಧಿಗೆ ಕ್ರಮ: ಆಯುಕ್ತೆ ರೇಣುಕಾ
Feb 27 2024, 01:32 AM ISTಗಡಿಯಾರ ಕಂಬ ಬಳಿ ವಿದ್ಯುತ್ ತಂತಿಗಳ ಸಮಸ್ಯೆ ಇದ್ದು, ಕೆಲಸ ಸ್ಥಗಿತವಾಗಿದೆ. ಉಳಿದಂತೆ ಇತರೆಡೆ ವೆಂಡಿಂಗ್ ಝೋನ್ಗೆ ಸ್ಥಳ ಗುರುತಿಸಲಾಗಿದೆ. ಆಗ ಬೀದಿ ಬದಿ ವ್ಯಾಪಾರಸ್ಥರ ಬೇಡಿಕೆಯಾದ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿ ಎಲ್ಲಾ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು. ಲೋಕಾಯುಕ್ತ ಪ್ರಕರಣ ಬಗೆಹರಿದ ನಂತರ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆಗಳ ನೀಡಲಾಗುವುದು. ಆರೋಗ್ಯ ವಿಮೆ ಒದಗಿಸಲು ಕ್ರಮ, ಬೀದಿ ಬದಿ ವ್ಯಾಪಾರಸ್ಥರು ಕೂಡ ಸಂಚಾರಕ್ಕೆ ತೊಂದರೆಯಾಗದಂತೆ ವ್ಯಾಪಾರ ಮಾಡಬೇಕು. ತ್ಯಾಜ್ಯವನ್ನು ಕಸದ ಗಾಡಿಗಳಿಗೆ ಹಾಕಿ ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ