ವಾಲ್ಮೀಕಿ ಹಗರಣ, ದಲಿತರ ಹಣ ದುರ್ಬಳಕೆಯಿಂದ ಹಿಂದುಳಿದ ವರ್ಗದವರು, ದಲಿತರ ಶಕ್ತಿಯನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಮುಸಲ್ಮಾನರ ಓಲೈಕೆಗೆ ನಿಂತಿದ್ದಾರೆ. ಮೈಸೂರಿನಲ್ಲಿ 101 ಕುರುಬರ ಮನೆಗಳಿಗೆ ವಕ್ಫ್ ಆಸ್ತಿ ಎಂದು ನೋಟೀಸ್ ಜಾರಿ ಮಾಡಿದ್ದರೂ ರಕ್ಷಣೆಗೆ ನಿಂತಿಲ್ಲ.
ಕಳಪೆ ಗುಣಮಟ್ಟದ ಔಷಧ ಬಳಕೆಯಿಂದಾಗಿಯೇ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಸಂಭವಿಸಿದ್ದು, ಈ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು. ಮೃತ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ₹25 ಲಕ್ಷ ಪರಿಹಾರ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.