ಶೀಘ್ರ ಆಶ‍್ರಯ ನಿವೇಶನ ಹಂಚಿಕೆ: ಜಿ.ಎಚ್. ಶ‍್ರೀನಿವಾಸ್
Dec 05 2024, 12:34 AM ISTಅತೀ ಶೀಘ್ರದಲ್ಲಿ ಆಶ‍್ರಯ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ತರೀಕೆರೆ ಶಾಸಕ ಜಿ.ಎಚ್. ಶ‍್ರೀನಿವಾಸ್ ಹೇಳಿದರು.ಅಜ್ಜಂಪುರ ಪಟ್ಟಣ ಪಂಚಾಯ್ತಿಯಲ್ಲಿ ಎಸ್.ಸಿ. ಎಸ್.ಟಿ ವಿದ್ಯಾರ್ಥಿಗಳಿಗೆ ರಾಜ್ಯ ಹಣಕಾಸು ನಿಗಮದ ಸಹಾಯ ಧನ, ವೈದಕೀಯ, ಇಂಜಿನಿಯರಿಂಗ್ ಪದವೀಧರರಿಗೆ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದವರು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಮೇಲೆ ಬರಲೆಂದು ರಾಜ್ಯದಲ್ಲೇ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಶೇ. 17 ರಿಂದ ಶೇ 24 ರವರೆಗೆ ಪ್ರೋತ್ಸಾಹಧನ ಹೆಚ್ಚಿಸಿದ್ದಾರೆ. ಈ ಯೋಜನೆ ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದರು.