ಕಾನ್ನಾಳ ಗ್ರಾಮದ ಬಾಂದಾರಕ್ಕೆ ಹರಿದ ಕಾಲುವೆ ನೀರು
Mar 05 2024, 01:30 AM ISTಬಸವನಬಾಗೇವಾಡಿ: ಪ್ರತಿಭಟನೆ ವೇಳೆ ಅಧಿಕಾರಿಗಳು ನೀಡಿದ ಭರವಸೆಯಂತೆ ತಾಲೂಕಿನ ಕಾನ್ನಾಳ ಗ್ರಾಮದ ಬಾಂದಾರಕ್ಕೆ ಮುಳವಾಡ ಏತನೀರಾವರಿ ಯೋಜನೆಯ ಸಂಕನಾಳ ಮುಖ್ಯ ಕಾಲುವೆಯಿಂದ ನೀರು ಬಿಡಲು ಅಧಿಕಾರಿಗಳ ಸಮ್ಮುಖದಲ್ಲಿ ಫೈಪ್ ಲೈನ್ ಅಳವಡಿಕೆ ಮಾಡಲಾಯಿತು. ಕುಡಿಯುವ ನೀರಿನ ತಾಪತ್ರಯ, ಜಾನುವಾರುಗಳಿಗೆ ನೀರು ಇಲ್ಲದಂತಾಗಿದೆ. ಎರಡು ಕಿಮೀ ಅಂತರದಲ್ಲಿರುವ ಈ ಕಾಲುವೆಯಿಂದ ಗ್ರಾಮದ ಬಾಂದಾರಕ್ಕೆ ನೀರು ಬಿಟ್ಟರೆ ಗ್ರಾಮದಲ್ಲಿ ಅಂತರ್ಜಲ ಮಟ್ಟಕ್ಕೆ ಪೂರಕವಾಗುತ್ತದೆ.