ಅರಸೀಕೆರೆ ತಾಲೂಕಲ್ಲಿ ಹೆಚ್ಚು ಶುದ್ಧ ಕುಡಿಯುವ ನೀರು ಘಟಕ
Jun 13 2025, 07:14 AM ISTಮನುಷ್ಯನಿಗೆ ಬಹಳ ಮುಖ್ಯವಾದದ್ದು ಆರೋಗ್ಯ. ಅದಕ್ಕೆ ಶುದ್ಧ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ನಿರ್ದೇಶಕ ಸುರೇಶ್ ಮೊಲಿ ಹೇಳಿದರು. ಧರ್ಮಸ್ಥಳ ಕ್ಷೇತ್ರ ನಿರ್ವಹಣೆ ಮಾಡುತ್ತಿರುವ ಈ ಘಟಕಗಳು ನೈರ್ಮಲ್ಯದಿಂದ ಇರುವಂತೆ ಗಮನ ಕೊಡಿ ಪ್ರಾಮಾಣಿಕ ಸೇವೆಯಿಂದ ನೀವು ಬೆಳೆಯಲು ಸಾಧ್ಯವಾಗುತ್ತದೆ ನಾನು ಸಹ ಒಬ್ಬ ಪ್ರೇರಕನಾಗಿದ್ದೆ 30 ವರ್ಷಗಳ ಹಿಂದೆ, ಇಂದು ನಿರ್ದೇಶಕನಾಗಿದ್ದೇನೆ ನಮ್ಮ ಕರ್ತವ್ಯ ನಿಷ್ಠೆ ನಮ್ಮನ್ನು ಬೆಳೆಸುತ್ತದೆ ಎಂದು ಕಿವಿಮಾತು ಹೇಳಿದರು.