ಕೆನಾಲ್: ಡಾ. ಪರಮೇಶ್ವರ್ ಮನೆ ಬಳಿ ಪ್ರತಿಭಟನೆ
May 30 2024, 12:47 AM ISTಹೇಮಾವತಿ ನೀರಿನ ತುಮಕೂರು ಜಿಲ್ಲೆಯ ಹಕ್ಕಿಗಾಗಿ ಗುರುವಾರ ಬೆಳಗ್ಗೆ 10 ಗಂಟೆಗೆ ಜಿಲ್ಲೆಯ ಎಲ್ಲಾ ಪಕ್ಷದ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಹೋರಾಟಗಾರರು, ಎಲ್ಲಾ ಸಂಘ ಸಂಸ್ಥೆಗಳು, ನಾಗರಿಕರು ಮತ್ತು ರೈತರನ್ನು ಒಳಗೊಂಡು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್ ಹೆಗ್ಗೆರೆ ನಿವಾಸದ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಸಿ ಮನವಿ ಪತ್ರ ನೀಡುವ ಬಗ್ಗೆ ತೀರ್ಮಾನಿಸಲಾಯಿತು.