ಪ್ರಧಾನಿ ನರೇಂದ್ರ ಮೋದಿಯವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದು, ಜನರ ಕೈಗೆ ಹೆಚ್ಚು ಹಣ ನೀಡುವ ‘ಜನರ ಬಜೆಟ್’ ಎಂದು ಬಣ್ಣಿಸಿದ್ದಾರೆ.
‘ಮೋದಿ ಸರ್ಕಾರ ಲಕ್ಷಾಂತರ ಕೋಟಿ ರು. ಸಾಲ ಮಾಡಿ ನಮ್ಮ ತಲೆಗಳನ್ನು ಅಡ ಇಟ್ಟಿದೆ ಅಂತಾ ನಾನು ಹೇಳಿದರೆ, ನೀವು ಚಪ್ಪಾಳೆ ಮತ್ತು ಶಿಳ್ಳೆ ಹೊಡೆಯುತ್ತೀರಾ! ನಿಮಗೆ ಸ್ವಲ್ಪ ಬುದ್ಧಿ ಬೇಡ್ವಾ?’ ಎಂದು ಜೋರು ಮಾಡಿದರು. ಆಗ ಸಭಾಂಗಣ ನಗೆಗಡಲಲ್ಲಿ ತೇಲಿತು.
ಕುಂಭಮೇಳಗಳು ವಿವಿಧತೆಯಲ್ಲಿ ಏಕತೆ ಸಾರುತ್ತದೆ ಎಂದು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದ ಕಾವೇರಿ ತಟದಲ್ಲಿ ಫೆ.10ರಿಂದ 12ರವರೆಗೆ ಟಿ-ನರಸೀಪುರದಲ್ಲಿ ನಡೆಯುವ ಕುಂಭಮೇಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಭಾರತದ ಗುರಿ ಅಭಿವೃದ್ಧಿಯೇ ಹೊರತು ವಿಸ್ತಾರವಾದ ಅಲ್ಲ. ಭಾರತ ಯಾವತ್ತಿಗೂ ಮುಕ್ತ, ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಸಮೃದ್ಧತೆಯನ್ನು ಇಂಡೋ-ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಅಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಬಳಿ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಿದ ಜಿಲ್ಲಾಡಳಿತ ಕ್ರಮ ವಿರೋಧಿಸಿ ಸಂಘ-ಸಂಸ್ಥೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಕಳಿಸುವ ಮೂಲಕ ಚಳವಳಿ ನಡೆಸಲಾಗುತ್ತದೆ