ರೇಖಾಗುಪ್ತ ಆಯ್ಕೆ ಮಹಿಳಾ ಸಂಕುಲಕ್ಕೆ ಬಿಜೆಪಿ ಕೊಡುಗೆ
Feb 21 2025, 12:49 AM ISTನವದೆಹಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ನಾಯಕಿ ರೇಖಾ ಗುಪ್ತರನ್ನು ಮುಖ್ಯಮಂತ್ರಿಯಾಗಿ ಮಾಡಿರುವುದು ಮಹಿಳಾ ಸಂಕುಲಕ್ಕೆ ಬಿಜೆಪಿ ನೀಡಿದ ಅನನ್ಯ ಕೊಡುಗೆ ಆಗಿದೆ ಎಂದು ಹಿರಿಯ ವಕೀಲ ಹಾಗೂ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಹೇಳಿದ್ದಾರೆ. ಸಂಘಪರಿವಾರದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ದಿಟ್ಟ ಮಹಿಳೆ ಎಂದೇ ಗುರುತಿಸಿಕೊಂಡಂತಹ ರೇಖಾಗುಪ್ತ ನಿಜವಾಗಲು ಅಭಿನಂದನಾರ್ಹರು ಎಂದವರು ತಿಳಿಸಿದರು.