ಹ್ಯೂಂಡಾಯ್ ಕಾರ್ ಶೋ ರೂಂಗೆ ಬೆಂಕಿ
Feb 17 2024, 01:17 AM ISTಕರೆಂಟ್ ಶಾರ್ಟ್ ಸರ್ಕ್ಯೂರ್ಟ್ನಿಂದಾಗಿ ಶಿವಮೊಗ್ಗ ನಗರದ ಶಂಕರ ಮಠ ರಸ್ತೆಯ ರಾಹುಲ್ ಹ್ಯೂಂಡಾಯ್ ಕಾರ್ ಶೋ ರೂಂಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರು. ಮೌಲ್ಯವ ಕಾರು ಮತ್ತು ಇತರೆ ವಸ್ತುಗಳು ಸುಟ್ಟು ಕರಕಲಾಗಿವೆ. ರಾತ್ರಿ 10 ಗಂಟೆಗೆ ಅಗ್ನಿ ಅವಘಡ ಸಂಭವಿಸಿದ್ದು, ಶೋ ರೂಂ ನಲ್ಲಿದ್ದ ಹೊಸ ಕಾರುಗಳು ಹಾಗೂ ಸರ್ವಿಸ್ ಗೆ ಬಂದಿದ್ದ ಲಕ್ಷಾಂತರ ರು. ಮೌಲ್ಯದ ಕಾರುಗಳು ಭಾಗಶಃ ಅಥವಾ ಪೂರ್ಣ ಬೆಂಕಿಗೆ ಆಹುತಿಯಾಗಿರುವುದಾಗಿ ತಿಳಿದುಬಂದಿದೆ.