ನಗರದ ಉದ್ಯಾನವನಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅನುಷ್ಠಾನದ ಮೂಲಕ ಅಂತರ್ಜಲಮಟ್ಟ ವೃದ್ಧಿಗೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ₹2.50 ಕೋಟಿ ವೆಚ್ಚದಲ್ಲಿ 27 ಉದ್ಯಾನವನದಲ್ಲಿ 250 ಇಂಗು ಗುಂಡಿ ನಿರ್ಮಿಸಲು ಮುಂದಾಗಿದೆ.
ಹಿರಿಯ ಲೇಖಕಿ ಕಮಲಾ ಹಂಪನಾ(89) ಹೃದಯಾಘಾತದಿಂದ ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ನಿದ್ದೆಯಲ್ಲೇ ಹೃದಯಾಘಾತದಿಂದ ಕಮಲಾ ಹಂಪನಾ ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಜಾಪುರದ ಟೆಕಿ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್‌ಗೆ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಬಂದ ಪಾರ್ಸೆಲ್ ತೆರೆವ ವೇಳೆ ಪ್ಯಾಕೇಜಿಂಗ್ ಟೇಪ್ ನಡುವೆ ಹಾವಿನ ಮರಿಯೊಂದು ಸಿಕ್ಕಿಹಾಕಿಕೊಂಡ ರೀತಿ ಕಾಣಿಸಿಕೊಂಡಿದೆ ಎಂಬ ವಿಡಿಯೋ ವೈರಲ್ ಆಗಿದೆ.
ಹಲವು ವರ್ಷಗಳಿಂದ ಖಾಲಿ ಇದ್ದಂತಹ ಗಾಂಧಿನಗರದ ಬಹುಮಹಡಿ ವಾಹನ ನಿಲುಗಡೆ ಕಟ್ಟಡ ಇದೀಗ ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ವಾಹನ ನಿಲುಗಡೆ ಕಟ್ಟಡದಲ್ಲಿ ಅಡ್ವಾನ್ಸ್ ಪಾರ್ಕಿಂಗ್ ತಂತ್ರಜ್ಞಾನ (ಎಪಿಟಿ) ಹೊಂದಿದ ಹೆಗ್ಗಳಿಕೆಯೊಂದಿಗೆ ಜೂನ್ 20ರಂದು ಉದ್ಘಾಟನೆಗೊಳ್ಳುತ್ತಿದೆ.
ಬೆಸ್ಕಾಂ ತಾವರೆಕೆರೆ ಉಪ ವಿಭಾಗ ಹಾಗೂ ಪೀಣ್ಯ ವ್ಯಾಪ್ತಿಯಲ್ಲಿನ ವಿದ್ಯುತ್ ಉಪ ಕೇಂದ್ರಗಳಲ್ಲಿ ಜೂ.15 ಹಾಗೂ ಜೂ.16ರಂದು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದ ವಿವಿಧೆಡೆ ತೀವ್ರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ರಾಜಧಾನಿ ಬೆಂಗಳೂರಿನ 10 ಶುದ್ಧಕುಡಿಯುವ ನೀರಿನ ಘಟಕ ಹಾಗೂ ಕೊಳವೆ ಬಾವಿಯಿಂದ ಪೂರೈಕೆ ಆಗುವ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯ ಪತ್ತೆಯಾಗಿರುವ ಆತಂಕಕಾರಿ ವರದಿ ಬಂದ ಹಿನ್ನೆಲೆಯಲ್ಲಿ ಆ ಘಟಕಗಳು ಮತ್ತು ಕೊಳವೆ ಬಾವಿಯಿಂದ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.