ಪಿಎಲ್ಡಿ ಬ್ಯಾಂಕ್ ಚುನಾವಣೆ: ಪರಿಶಿಷ್ಟರ ಸ್ಪರ್ಧೆಗೆ ವಿಘ್ನ
Feb 12 2025, 12:34 AM ISTದೊಡ್ಡಬಳ್ಳಾಪುರ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ 14 ನಿರ್ದೇಶಕ ಸ್ಥಾನಗಳಿಗೆ ಫೆ.16ರಂದು ಚುನಾವಣೆ ನಡೆಯಲಿದೆ. ಆದರೆ, ಎಸ್.ಎಸ್ ಘಾಟಿ ಮೀಸಲು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪರಿಶಿಷ್ಟ ಸಮುದಾಯದ ಮತದಾರರನ್ನು ಅನರ್ಹ ಮಾಡುವ ಮೂಲಕ ಚುನಾವಣೆಯಲ್ಲಿ ಸ್ವರ್ಧಿಸುವ ಹಕ್ಕನ್ನು ಕಸಿಯುವ ಪ್ರಯತ್ನ ನಡೆದಿದೆ ಎಂದು ದಲಿತ ಮುಖಂಡ ಎಂ.ಸುಬ್ರಮಣ್ಯ ಆರೋಪಿಸಿದರು.