ಮಂಡ್ಯ ತಾಲೂಕು ಈಚಗೆರೆಯಲ್ಲಿ 27 ವರ್ಷಗಳ ಬಳಿಕ ಹಬ್ಬದ ಸಂಭ್ರಮ..!
Mar 21 2024, 01:02 AM ISTಮಂಡ್ಯ ತಾಲೂಕಿನ ಈಚಗೆರೆ ಗ್ರಾಮದಲ್ಲಿ 27 ವರ್ಷಗಳ ಬಳಿಕ ಮಾ.21ರಿಂದ ಎರಡು ದಿನಗಳ ಕಾಲ ಗ್ರಾಮದಲ್ಲಿ ಶ್ರೀಹಿರಿಯಮ್ಮ, ಶ್ರೀ ಕಾಳಿಕಾಂಬ ದೇವಿಯ ಕೊಂಡ-ಬಂಡಿ ಉತ್ಸವ ಸಂಭ್ರಮದಿಂದ ಜರುಗಲಿದೆ. ಉತ್ಸವದ ಅಂಗವಾಗಿ ಇಡೀ ಗ್ರಾಮ ವಿದ್ಯುದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ಮಾ.21ರ ಮುಂಜನೆಯಿಂದಲೇ ಶ್ರೀಹಿರಿಯಮ್ಮ, ಶ್ರೀಕಾಳಿಕಾಂಬ ದೇವರಿಗೆ ಪೂಜಾ ಕೈಂಕರ್ಯಗಳು ನಡೆಯಲಿದೆ.