ಮಂಡ್ಯ ತಾಲೂಕಿನ ಹಳುವಾಡಿ ಗ್ರಾಪಂನಲ್ಲಿ ೨೨ ಲಕ್ಷ ರು. ದುರ್ಬಳಕೆ
May 11 2025, 11:47 PM ISTಮಂಡ್ಯ ತಾಲೂಕಿನ ಹಳುವಾಡಿ ಗ್ರಾಮ ಪಂಚಾಯ್ತಿಯ ಸಾಮಾನ್ಯ ಸಭೆಯ ಗಮನಕ್ಕೆ ತಾರದೆ, ಕ್ರಿಯಾಯೋಜನೆ ರೂಪಿಸಿ ಅನುಮೋದನೆಯನ್ನೂ ಪಡೆಯದೆ ಪಂಚಾಯ್ತಿಯ ಅಂದಿನ ಅಧ್ಯಕ್ಷೆ ಎಚ್.ಎಸ್.ಪ್ರೇಮಾ ಮತ್ತು ಪಿಡಿಒ ನರಸಿಂಹಮೂರ್ತಿ ಇಬ್ಬರೂ ಸೇರಿ ೨೨ ಲಕ್ಷ ರು. ಹಣ ದುರುಪಯೋಗ ಪಡಿಸಿಕೊಂಡಿದ್ದಾರೆಂದು ಗ್ರಾಪಂ ಉಪಾಧ್ಯಕ್ಷ ಎಚ್.ಕೆ.ಮಂಜುನಾಥ್ ಆರೋಪಿಸಿ ನೀಡಿದ್ದ ದೂರಿಗೆ ಸಾಮಾಜಿಕ ಪರಿಶೋಧನಾ ವರದಿಯಲ್ಲೂ ಹಲವಾರು ದೋಷಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.