ಕನ್ನಡ ಭಾಷೆಯಾಗಲಿ, ರಾಷ್ಟ್ರಕವಿಗಳ ಹೆಸರು ಘೋಷಣೆಯಾಗಲಿ, ಕನ್ನಡ ಶಾಲೆಗಳು ಅಭಿವೃದ್ಧಿಯಾಗಲಿ, ಹಳೇ ನಿರ್ಣಯಗಳು ಜಾರಿಯಾಗಲಿ ಮುಂತಾದ ಆಶಯಗಳನ್ನು ಹೊತ್ತುಕೊಂಡು, ಸಮ್ಮೇಳನದ ರಥ ಬಳ್ಳಾರಿಯತ್ತ ಮುಖ ಮಾಡಿತು
ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಮಂಡ್ಯದಲ್ಲಿ ಸಂಘಟಕರ ವಿರೋಧವನ್ನೂ ಲೆಕ್ಕಿಸದೆ ಕೆಲ ಮುಖಂಡರು ಸಾರ್ವಜನಿಕರಿಗೆ ಬಾಡೂಟ ವಿತರಿಸಿ ಸರ್ಕಾರಕ್ಕೆ ಸೆಡ್ಡು ಹೊಡೆದರು.
ಸರ್ಕಾರದ ಶಕ್ತಿ ಯೋಜನೆ ಒಂದೆಡೆಯಾದರೆ, ಸಮ್ಮೇಳನಕ್ಕೆ ಬರುವವರಿಗೆ ಉಚಿತ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದ್ದ ಹಿನ್ನೆಲೆಯಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 2ನೇ ದಿನ ಜನಸಾಗರವೇ ಹರಿದು ಬಂದಿತು.
ಆತಿಥ್ಯಕ್ಕೆ ಮಂಡ್ಯ ಹೆಸರುವಾಸಿ ಎಂಬುದನ್ನು ಸಾಹಿತ್ಯ ಸಮ್ಮೇಳನ ಸಾಬೀತುಪಡಿಸಿದೆ. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರಂಭಕ್ಕೆ ಮುನ್ನವೇ ಚರ್ಚಾಗೋಷ್ಠಿ ಆರಂಭವಾಗಿದೆ. ಬಾಡೂಟ ಕುರಿತ ಬೇಕು? ಬೇಡಗಳೇ ಚರ್ಚೆಯ ಪ್ರಧಾನ ವಿಷಯ ಎಂಬುದು ಈ ಬಾರಿಯ ವಿಶೇಷ.