ಮನ್ ಕೀ ಬಾತ್ ಕೇಳಿ ರೊಟ್ಟಿ ತಯಾರಕ ಮಹಿಳೆ ಕಣ್ಣೀರು!
Jun 30 2025, 12:34 AM ISTಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಂಘದ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ, ಕಲಬುರಗಿ ಕೃಷಿ ಇಲಾಖೆ ಜೆಡಿ ಕಛೇರಿಯಲ್ಲಿ ಮನ್ ಕಿ ಬಾತ್ ವೀಕ್ಷಿಸುತ್ತಿದ್ದವರು ಚಪ್ಪಾಳೆಯ ಸುರಿಮಳೆ ಸುರಿಸಿದರು. ಮೋದಿ ಬಾಯಲ್ಲಿ ಕಲಬುರಗಿ ರೊಟ್ಟಿ ವಿಚಾರ ಬರುತ್ತಿದ್ದಂತೆಯೇ ರೊಟ್ಟಿ ಉತ್ಪಾದಕಿ ಅಯ್ಯಮ್ಮ ಅವರ ಕಣ್ಣುಗಳಿಂದ ನೀರು ಸುರಿಯಿತು. ತಮ್ಮ ಕಡು ಕಷ್ಟದ ದಿನಗಳನ್ನು ನೆನೆದು ಅವರು ಭಾವುಕರಾದರು.