ಚೆಸ್ ಕ್ರೀಡೆ ಮಕ್ಕಳ ಮಾನಸಿಕ ಸ್ಥೈರ್ಯ ಹೆಚ್ಚಿಸುತ್ತದೆ
Sep 15 2024, 01:48 AM ISTಹಾಸನ ನಗರದ ಸಮೀಪ ಚಿಕ್ಕಕೊಂಡಗುಳ, ರಿಂಗ್ ರಸ್ತೆ ಬಳಿ ಇರುವ ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಚೆಸ್ ಅಸೋಸಿಯೇಷನ್, ಕದಂಬ ಚೆಸ್ ಅಕಾಡೆಮಿ ಮತ್ತು ರಾಯಲ್ ಅಪೋಲೊ ಶಾಲೆಯ ಸಹಭಾಗಿತ್ವದೊಂದಿಗೆ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 15 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ರಾಜ್ಯ ಮಟ್ಟದ ಫಿಡೆ ರೇಟೆಡ್ ಎರಡು ದಿನದ ಚೆಸ್ ಪಂದ್ಯಾವಳಿ ನಡೆಯಿತು. ಚೆಸ್ ಕ್ರೀಡೆ ಎಂಬುದನ್ನು ಮಕ್ಕಳಿಂದಲೇ ಅಳವಡಿಸಿಕೊಳ್ಳುವುದರಿಂದ ಮಾನಸಿಕ ಸ್ಥೈರ್ಯ ಹಾಗೂ ಅವರ ಮೆದುಳಿನ ಬುದ್ಧಿ ಚುರುಕುಗೊಳ್ಳುತ್ತದೆ ಎಂದು ರಾಯಲ್ ಅಪೋಲೊ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಎಲ್.ಪಿ. ರವಿಕುಮಾರ್ ತಿಳಿಸಿದರು.