ಜಿಲ್ಲೆಯಲ್ಲಿ ಅಕ್ರಮ ಭೂ ಮಾರಾಟ ಅವ್ಯಾಹತ
Jul 15 2024, 01:48 AM ISTಕನ್ನಡಪ್ರಭ ವಾರ್ತೆ ವಿಜಯಪುರ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರಿಗೆ ಭೂಮಿ ಮಾರಾಟ ದಂಧೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಕಂಡುಬಂದಿದೆ. ಆದರೆ, ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡುವ ಸಂದರ್ಭದಲ್ಲಿಯೇ ಇವು ಬೆಳಕಿಗೆ ಬರುತ್ತಿರುವುದರಿಂದ ಹಲವಾರು ಅಕ್ರಮಗಳಿಗೆ ಕಡಿವಾಣ ಕೂಡ ಬಿದ್ದಿದೆ. ಅಮಾಯಕರು, ಅಸಹಾಯಕರು, ಅನಕ್ಷರಸ್ಥರು, ಬಡವರ ಆಸ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಅವರ ಆಸ್ತಿ ಮಾರಾಟ ಮಾಡಲು ತಂಡವೇ ಸಿದ್ಧವಾಗಿರುತ್ತದೆ.