ಒಳ ಮೀಸಲಾತಿ ಸಮೀಕ್ಷೆಯ ಲೋಪದೋಷ ಸರಿಪಡಿಸಿ
May 13 2025, 11:45 PM ISTಒಳ ಮೀಸಲಾತಿ ಸಂಬಂಧ ಎಸ್.ಸಿ. ಪಟ್ಟಿಯಲ್ಲಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯದಲ್ಲಿ ಹಲವು ಲೋಪದೋಷಗಳು ಕಂಡುಬಂದಿದ್ದು, ಕೂಡಲೇ ಅವುಗಳನ್ನು ಸರಿಪಡಿಸಿ, ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಒತ್ತಾಯಿಸಿದರು. ಪರಿಶಿಷ್ಟ ಜಾತಿಯ ೧೦೧ ಜಾತಿಗಳ ಸಮೀಕ್ಷೆ ಕಾರ್ಯ ಮೇ ೫, ೨೦೨೫ರಿಂದ ಪ್ರಾರಂಭವಾಗಿದೆ. ಮೂರು ಹಂತಗಳಲ್ಲಿ ನಡೆಯುತ್ತಿರುವ ಈ ಸಮೀಕ್ಷೆ ಕಾರ್ಯ ಮೇ ೨೩ರಂದು ಕೊನೆಗೊಳ್ಳುತ್ತದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದರು.