ಮುಖ್ಯಮಂತ್ರಿ ಮನೆ ಚಲೋ: ಕಟ್ಟಡ ಕಾರ್ಮಿಕರಿಂದ ಪೋಸ್ಟರ್ ಬಿಡುಗಡೆ
Jul 22 2024, 01:21 AM ISTರಾಜ್ಯದ ಉಚ್ಛ ನ್ಯಾಯಾಲಯ ಆದೇಶದಂತೆ ಶೈಕ್ಷಣಿಕ ಧನಸಹಾಯ ಪಾವತಿ ಮಾಡಿ, ಬೋಗಸ್ ಖರೀದಿ ಪ್ರಕ್ರಿಯೆ ನಿಲ್ಲಿಸಿ, ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸಮರ್ಪಕ ಜಾರಿ ಮಾಡುವಂತೆ ಅಗ್ರಹಿಸಿ, ಆಗಸ್ಟ್ 5ರಂದು ಕಟ್ಟಡ ನಿರ್ಮಾಣ ಕಾರ್ಮಿಕರಿಂದ ಮುಖ್ಯಮಂತ್ರಿ ಮನೆ ಚಲೋ ಕಾರ್ಯಕ್ರಮ ನಡೆಯಲಿದೆ. ಇದರ ಪೂರ್ವಭಾವಿಯಾಗಿ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಭಾನುವಾರ ಕಟ್ಟಡ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಪೋಸ್ಟರ್ ಬಿಡುಗಡೆ ಮೂಲಕ ಪ್ರತಿಭಟನೆ ನಡೆಸಿತು.