ಧ್ರುವನಾರಾಯಣ್ ಜನಪರ ರಾಜಕಾರಣಕ್ಕೆ ಮಾದರಿ ವ್ಯಕ್ತಿತ್ವ: ಮುಖ್ಯಮಂತ್ರಿ ಸಿದ್ದರಾಮಯ್ಯ
Mar 13 2024, 02:06 AM ISTಸಾಮಾನ್ಯವಾಗಿ ರಾಜಕಾರಣಿಗಳು ಬದುಕಿದ್ದಾಗ ಜನಪ್ರಿಯರಾಗಿರುವುದು ಸಹಜ, ಆರ್. ಧ್ರುವನಾರಾಯಣ್ ಅವರು ಕಾಲವಾದ ನಂತರವೂ ಅವರ ಜನಪ್ರಿಯತೆ ಬೆಳೆಯುತ್ತಿದೆ, ಯಾವುದೇ ಜನಪ್ರತಿನಿಧಿಯಾದವರು ಜನಪರ ಅಭಿವೃದ್ದಿಪರವಾಗಿ ಇರಬೇಕು ಜೊತೆಗೆ ಜನರನ್ನು ಪ್ರೀತಿಸುವ ಗುಣವಿರಬೇಕು ಈ ಎಲ್ಲ ಗುಣಗಳು ಸಹ ಧ್ರುವನಾರಾಯಣ್ ಅವರಲ್ಲಿತ್ತು. ಆದ್ದರಿಂದಲೇ ಅವರನ್ನು ಜನರು ಎಂದಿಗೂ ಬಿಟ್ಟು ಇರುತ್ತಿರಲಿಲ್ಲ, ಅವರ ಸರಳ, ಸಜ್ಜನ, ಸಭ್ಯತೆಯಿಂದ ಕೂಡಿದ ನಾಯಕತ್ವ ಗುಣಗಳನ್ನು ಹೊಂದಿದ್ದಂತವರು, ಜನಪರ ರಾಜಕಾರಣಕ್ಕೆ ಧ್ರುವನಾರಾಯಣ್ ಮಾದರಿ ವ್ಯಕ್ತಿತ್ವ