ಬಾಲಕಿಯರ ವಿಭಾಗದಲ್ಲಿ ಆಡುತ್ತಿರುವ ಜಿಲ್ಲೆಯ ಏಕೈಕ ಮುಸ್ಲಿಂ ಆಟಗಾರ್ತಿ ತಾನಿಯಾ
Nov 20 2023, 12:45 AM ISTಇಲ್ಲಿನ ಚೌಡ್ಲು ಗ್ರಾಮದ ತಾನಿಯಾ, ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಆಸಕ್ತಿ ಹೊಂದಿದ್ದರು. ಆಕೆಯ ತಂದೆ ಅಸ್ಲಂ ಕೂಡ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದರು. ಅವರನ್ನು ಚಿಕ್ಕಂದಿನಿಂದಲೇ ಗಮನಿಸುತ್ತಿದ್ದ ಬಾಲಕಿ ತಾನಿಯಾ, ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದರೂ ಕೂಡ ಮನೆಯಿಂದ ಹೊರಬಂದು ೫ನೇ ತರಗತಿಗೆ ಮಡಿಕೇರಿಯ ಕ್ರೀಡಾ ಹಾಸ್ಟೆಲ್‌ಗೆ ಆಯ್ಕೆಯಾದಳು. ಹೀಗೆ ಕ್ರೀಡಾ ಜೀವನ ಆರಂಭಿಸಿದ ಆಕೆ ಈಗ ಹೊಸ ಎತ್ತರಕ್ಕೇರಲಾರಂಭಿಸಿದ್ದಾರೆ.