ಮೋದಿ ಕಾರ್ಯಕ್ರಮ ವೇದಿಕೆ ಸಿದ್ಧತೆ ಪರಿಶೀಲಿಸಿದ ಯಡಿಯೂರಪ್ಪ
Mar 18 2024, 01:49 AM ISTಪ್ರಧಾನಿ ನರೇಂದ್ರ ಮೋದಿ ಸೋಮವಾರ ಶಿವಮೊಗ್ಗಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಿವಮೊಗ್ಗದ ನಗರದ ಅಲ್ಲಮಪ್ರಭು ಮೈದಾನಕ್ಕೆ ಶನಿವಾರ ರಾತ್ರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ, ಕಾರ್ಯಕ್ರಮದ ವೇದಿಕೆ ಸಿದ್ಧತೆ ಪರಿಶೀಲಿಸಿದರು. ಮೋದಿಯವರಿಗೆ ನಾನು ಒಂದು ಮಾತು ಕೊಟ್ಟಿದ್ದೇನೆ. 25 ರಿಂದ 26 ಕ್ಷೇತ್ರದಲ್ಲಿ ಗೆದ್ದು ನಿಮ್ಮನ್ನು ನೋಡಲು ನಾನು ಲೋಕಸಭೆಗೆ ಬರ್ತೇನೆ ಎಂದು ಮಾತು ಕೊಟ್ಟಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.