ಸಂಘರ್ಷ ಪೀಡಿತ ಇರಾನ್‌ನಿಂದ ರಕ್ಷಿಸಿ ಭಾರತಕ್ಕೆ ಕರೆತರಲ್ಪಟ್ಟ ಬಳಿಕ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ನಮಗೆ ದೆಹಲಿಯಿಂದ ಶ್ರೀನಗರಕ್ಕೆ ತೆರಳಲು ಸೂಕ್ತ ಬಸ್ ವ್ಯವಸ್ಥೆ ಮಾಡಿಲ್ಲ ಎಂದು ದೂರಿದ್ದಾರೆ.
ಇರಾನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಸಂಘರ್ಷದ ನಡುವೆ ಜಾಗತಿಕ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 78 ಡಾಲರ್‌ಗಿಂತ ಹೆಚ್ಚಾಗಿದೆ
ಭಾರತ ಮತ್ತು ಪಾಕ್ ನಡುವಿನ ಕದನವಿರಾಮಕ್ಕೆ ತಮ್ಮ ಮಧ್ಯಸ್ಥಿಕೆಯೇ ಕಾರಣ ಎಂದು ಟ್ರಂಪ್ ಇದೀಗ 12ನೇ ಬಾರಿ ಹೇಳಿಕೊಂಡಂತಾಗಿದೆ.
ಫ್ರಾನ್ಸ್‌ನ ಅತ್ಯಾಧುನಿಕ ಯುದ್ಧವಿಮಾನ ರಫೇಲ್‌ನ ಬಾಡಿ (ಫ್ಯೂಸೆಲಾಜ್) ಇನ್ನು ಭಾರತದಲ್ಲೇ ನಿರ್ಮಾಣವಾಗಲಿದೆ. ಈ ಸಂಬಂಧ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿಯು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಇಸ್ಕಾನ್ ಜಗನ್ನಾಥ ಮಂದಿರದ ರಥದ ಚಕ್ರಗಳನ್ನು ಬದಲಿಸುವ 20 ವರ್ಷಗಳ ಪ್ರಯತ್ನ ಈಗ ಫಲ ನೀಡಿದೆ, ವಿಶೇಷವೆಂದರೆ, ಈ ರಥಕ್ಕೆ ಬೋಯಿಂಗ್ ವಿಮಾನದ ಚಕ್ರವನ್ನು ಅಳವಡಿಸಲಾಗಿತ್ತು. ಅದರ ಜಾಗಕ್ಕೀಗ ಸುಖೋಯ್ ಯುದ್ಧವಿಮಾನದ ಚಕ್ರಗಳು ಬರಲಿವೆ.