ಯುದ್ಧ ಮುಂದುವರಿಸಿದ್ದರೆ ಸ್ವಾಗತಿಸಬಹುದಿತ್ತು
May 16 2025, 02:08 AM ISTಇಡೀ ದೇಶದ ಜನ ಭಯೋತ್ಪಾದನೆ ವಿರುದ್ಧ ನಿಲ್ಲಬೇಕಿದೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಹಾಗೂ ರಾಹುಲ್ ಗಾಂಧಿ ಅವರ ಸೂಚನೆಯಂತೆ ಬೆಂಬಲ ಕೊಟ್ಟಿದ್ದೇವೆ. ಅಮೆರಿಕಾ ಮಧ್ಯಸ್ಥಿಕೆ ವಹಿಸುವ ಬದಲು ಮೋದಿಯವರೇ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬಹುದಿತ್ತು. ಕದನ ವಿರಾಮ ಆಗಿದೆ. ನಾವು ಭಯೋತ್ಪಾದನೆ ವಿರುದ್ಧ ಇರಬೇಕು. ಪಹಲ್ಗಾಮ್ ನರಮೇಧದಿಂದ ತಾಯಂದಿರು, ಮಕ್ಕಳು ಕಣ್ಣೀರಿಟ್ಟಿರುವುದನ್ನು ಯಾವತ್ತೂ ಮರೆಯಲು ಆಗುವುದಿಲ್ಲ. ಯುದ್ಧ ಮುಂದುವರಿಸಿದ್ದರೆ ಸ್ವಾಗತಿಸಬಹುದಿತ್ತು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.