‘ವೈಯುಕ್ತಿಕವಾಗಿ ನಾನು ಹಿಂಸೆಯನ್ನು ಬೆಂಬಲಿಸುವುದಿಲ್ಲ. ಯುದ್ಧ ಅಂತೀವಲ್ಲ, ಯುದ್ಧ ಮಾಡೋದ್ರಿಂದ ಯಾರಿಗಾದರೂ ಒಳಿತಾಗುತ್ತಾ? ಇದರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ನಟಿ ರಮ್ಯಾ ಹೇಳಿದ್ದಾರೆ.
ನಾನು ಅನಿವಾರ್ಯವಾದಾಗ ಯುದ್ಧ ಮಾಡಬೇಕು ಎಂದಿದ್ದೇನೆಯೇ ಹೊರತು ಯುದ್ಧ ಮಾಡಲೇಬಾರದು ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಪಹಲ್ಗಾಂ ಉಗ್ರರ ದಾಳಿಗೆ ಪ್ರತೀಕಾರವಾಗಿ ಯುದ್ಧ ಸಾರುವುದು ಅನಗತ್ಯ ಎಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ನಾಯಕರು ಯುದ್ಧವನ್ನೇ ಸಾರಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಪಕ್ಷದವರು ಆಕ್ರೋಶ ವ್ಯಕ್ತಪಡಿಸಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕರು ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.