ನರೇಗಾ ಯೋಜನೆ ಸದುಪಯೋಗವಾಗಲಿ
Feb 08 2025, 12:30 AM ISTನರೇಗಾ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು. ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ದೇಶದ ಜನತೆ ಆರ್ಥಿಕ ಸಬಲತೆ ಹೊಂದಲು ಸಾಧ್ಯವಾಗುತ್ತಿದೆ. ಆದ್ದರಿಂದ ಕಡ್ಡಾಯವಾಗಿ ರೈತರು ನಮ್ಮ ಹಿಂದಿನ ಕಾಲದ ಪದ್ಧತಿಗಳಾದ ಬದು ನಿರ್ಮಾಣ, ಗೋ ಕಟ್ಟೆ ನಿರ್ಮಾಣ, ಕೃಷಿಯಲ್ಲಿ ಮಿಶ್ರಬೆಳೆಗಳಾದ ಜೋಳ, ತೊಗರಿ, ನವಣೆ, ಸಜ್ಜೆ, ಹೆಸರು, ಗುರಾಳುಗಳನ್ನು ಬೆಳೆಯುವ ಮೂಲಕ ಅಭಿವೃದ್ಧಿ ಮತ್ತು ಸ್ವಾವಲಂಬಿಗಳಾಗಬೇಕು ಎಂದರು.