ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಹಾವೇರಿ ನಗರ ಅಭಿವೃದ್ಧಿಗೆ ಪ್ರಯತ್ನ-ಶಾಸಕ ಲಮಾಣಿ
Dec 06 2024, 08:58 AM ISTಜಿಲ್ಲಾ ಕೇಂದ್ರವಾದರೂ ಹಾವೇರಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದೇವೆ. ಈ ಊರಿಗೆ ನಾನು ಎಂಎಲ್‌ಎ ಆಗಿದೀನಲ್ಲ ಎಂದು ಬೇಸರವಾಗುತ್ತದೆ. ಅದಕ್ಕಾಗಿ ಇಲ್ಲಿಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ರಿಂಗ್ ರೋಡ್ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಸ್ಮಾರ್ಟ್ ಸಿಟಿ ಅಥವಾ ಸೇಫ್ ಸಿಟಿ ಯೋಜನೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದು ಶಾಸಕ, ವಿಧಾನಸಭೆಯ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.