ಹಳ್ಳ ಹಿಡಿದ ಆಲೂರು ಪಟ್ಟಣದ ಮುಖ್ಯ ರಸ್ತೆ
Oct 23 2024, 12:37 AM IST ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಮುಖ್ಯ ರಸ್ತೆಯನ್ನು ಪಟ್ಟಣ ಪಂಚಾಯಿತಿಯವರು, ಕಳೆದ ಕೆಲವು ವರ್ಷಗಳ ಹಿಂದೆ ನಗರೋತ್ಥಾನ ಅನುದಾನದಡಿ ಡಾಂಬರೀಕರಣ ನಡೆಸಿ ಆ ಸಮಯದಲ್ಲಿದ್ದ, ಏಕಪದ ಕಾಂಕ್ರೀಟ್ ರಸ್ತೆಯನ್ನು ತೆರವುಗೊಳಿಸದೆ ಅದರ ಮೇಲೆ ಡಾಂಬರೀಕರಣ ನಡೆಸಿ, ಅವೈಜ್ಞಾನಿಕ ಮಾದರಿಯಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕಾಂಕ್ರೀಟ್ ರಸ್ತೆಯ ಮೇಲೆ ಡಾಂಬರು ನಿಲ್ಲುವುದಿಲ್ಲವೆಂದು ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು ಅದನ್ನು ಲೆಕ್ಕಿಸದೆ, ಪಟ್ಟಣ ಪಂಚಾಯಿತಿಯವರು ವೀರಶೈವ ಕಲ್ಯಾಣ ಮಂಟಪದಿಂದ ರೇಣುಮಿಲ್ವರೆಗೂ ಡಾಂಬರೀಕರಣ ನಡೆಸಿ , ಮಧ್ಯದಲ್ಲಿ ಕಾಂಕ್ರೀಟ್ ಡಿವೈಡರ್ ನಿರ್ಮಿಸಿ ದ್ವಿಪಥ ರಸ್ತೆಯನ್ನಾಗಿಸಿದ್ದರು.