ಪ್ರವಾಸಿಗರು ಬದಲಿ ರಸ್ತೆ ಬಳಸಿ ಸಹಕರಿಸಲು ಮನವಿ
Oct 28 2024, 01:08 AM ISTಕೊಪ್ಪ, ಅತ್ತಿಕೊಡಿಗೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಗ್ರೆ ಬಿಳಾಲುಕೊಪ್ಪ, ಬಸರಿಕಟ್ಟೆ ರಸ್ತೆ ಈ ಬಾರಿ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣ ಹಾಳಾಗಿದೆ. ಗುಡ್ಡಗಾಡು ಪ್ರದೇಶವಾದ ಇಲ್ಲಿ ಗುಡ್ಡದ ಝರಿಯಿಂದ ನಿರಂತರ ನೀರು ಒಸರಿ ಬರುತ್ತಿರುವ ಕಾರಣ ಮಳೆ ನಿಲ್ಲದೆ ರಸ್ತೆ ದುರಸ್ತಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅತ್ತಿಕೊಡಿಗೆ ಪಂಚಾಯತಿ ಅಧ್ಯಕ್ಷ ಟಿ.ಗೋಪಾಲ ಕೃಷ್ಣ ತಿಳಿಸಿದ್ದಾರೆ.