ಹಾಳಾದ ರಸ್ತೆ, ಹೊಲಗದ್ದೆ ದಾರಿಗಳ ದುರಸ್ತಿಗೆ ಹೆಚ್ಚಿದ ಒತ್ತಡ
Oct 04 2025, 01:00 AM ISTಪ್ರಸಕ್ತ ವರ್ಷದ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಸುರಿದ ಮಹಾಮಳೆಗೆ ಜನ ಸಾಮಾನ್ಯರು ಪರದಾಡುವಂತಾಗಿದೆ.ಅಫಜಲಪುರ ತಾಲೂಕಿನಾದ್ಯಂತ ವಾಡಿಕೆಯ ಮಳೆಗಿಂತ ಹೆಚ್ಚು 919 ಮಿಮಿ ಮಳೆ ದಾಖಲಾಗುವ ಮೂಲಕ ಮಹಾಮಳೆಯೇ ಸುರಿದಿದೆ. ಮಳೆಯ ಅವಾಂತರಕ್ಕೆ ತಾಲೂಕಿನಾದ್ಯಂತ ನೂರಾರು ಕಿಲೋ ಮೀಟರ್ ಸಂಪರ್ಕ ರಸ್ತೆಗಳು ಹಾಳಾಗಿವೆ, ನೂರಾರು ಮನೆಗಳು ನೆಲಕ್ಕುರುಳಿ ಜನರ ಬದುಕು ಬೀದಿಗೆ ಬಂದಿದೆ.