ಜಲಜೀವನ್ ಮಿಷನ್‌ಗೆ ಬಲಿಯಾದ ಬ್ಯಾರಡಹಳ್ಳಿ ಜಲ್ಲಿ ರಸ್ತೆ
Jun 22 2025, 11:48 PM ISTಕಳೆದ ಹಲವು ದಶಕಗಳಿಂದ ಈ ರಸ್ತೆಯನ್ನು ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ಬ್ಯಾಡ್ರಳ್ಳಿ ಹಾಗೂ ಹೊಸೂರು ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಬೇಸತ್ತ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಚುನಾವಣೆ ಬಹಿಷ್ಕರಿಸಲು ಮುಂದಾದರು. ಈ ಸಂದರ್ಭದಲ್ಲಿ ಈ ಹಿಂದೆ ಇದ್ದ ಶಾಸಕರು ಕೆಲವು ಮೀಟರುಗಳಷ್ಟು ಜಲ್ಲಿ ರಸ್ತೆ ಮಾಡಿಸಿ ಶೀಘ್ರ ಡಾಂಬರ್ ರಸ್ತೆ ಮಾಡಿಸಿಕೊಡುವ ಭರವಸೆ ನೀಡಿ ಗ್ರಾಮಸ್ಥರನ್ನು ಸಮಾಧಾನಗೊಳಿಸಿದ್ದರು. ಆದರೆ ಈಗ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಸಂಚಾರ ಅಸಾಧ್ಯವಾಗಿದೆ.