ರಸ್ತೆ ಮೇಲೆ ಗುಡ್ಡ ಕುಸಿತ ಹಿನ್ನೆಲೆ ಶಿರಾಡಿ ಬಂದ್
Jun 27 2025, 12:49 AM ISTಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಾಲೂಕಿನ ಶಿರಾಡಿಘಾಟಿ ಅಸ್ತವ್ಯಸ್ತಗೊಂಡಿದ್ದು, ಹೆದ್ದಾರಿ ಅಗಲೀಕರಣದ ನೆಪದಲ್ಲಿ ಗುಡ್ಡಗಳನ್ನು ಕಡಿದಾಗಿ ಕತ್ತರಿಸಿರುವ ಪರಿಣಾಮ ಇದೀಗ ಗುಡ್ಡಗಳು ಹೆದ್ದಾರಿ ಮೇಲೆ ಕುಸಿಯುತ್ತಿವೆ. ಬುಧವಾರ ರಾತ್ರಿ ಕೂಡ ದೋಣಿಗಾಲ್ ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದ್ದರಿಂದ ನೂರಾರು ವಾಹನಗಳು ಘಾಟಿಯಲ್ಲಿ ಸಿಲುಕಿದವು. ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಶಿರಾಟಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.