ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ಮನವಿ
Apr 14 2025, 01:24 AM ISTಭುವನಹಳ್ಳಿ ವೆಂಕಣ್ಣನಕೆರೆ ಗಿಡಗಂಟೆಗಳನ್ನು ಕೀಳಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾವಿನಹಳ್ಳಿ ಗ್ರಾಮದಿಂದ ಭುವನಹಳ್ಳಿಗೆ ಹೂವಿನಹಳ್ಳಿ ಎಚ್. ಎಂ. ಮಲ್ಲೇಗೌಡರು ಸುಮಾರು 45 ವರ್ಷಗಳ ಹಿಂದೆ ಈ ರಸ್ತೆ ಮಾಡಿಸಿದ್ದರು. ಈಗ ಬಾಗೂರು ನುಗ್ಗೇಹಳ್ಳಿ ಹೋಬಳಿ ಕೇಂದ್ರಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಜನಪ್ರತಿನಿಧಿಗಳು ಈ ರಸ್ತೆ ಮಾಡಿಸುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗುತ್ತದೆ. ವೆಂಕಣ್ಣನ ಕೆರೆಕೋಡಿ ನೀರು ಹರಿಯಲು ಸೇತುವೆ ಆಗಬೇಕು ಎಂದು ತಿಳಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.