ಕೆ.ಎಸ್.ಈಶ್ವರಪ್ಪ ರಾಜಕೀಯ ರಂಗದ ಅದ್ಭುತ ನಟ
Mar 20 2024, 01:22 AM ISTಈಶ್ವರಪ್ಪ ರಾಜಕೀಯ ರಂಗದ ಅದ್ಭುತ ನಟ. ಕಲಾವಿದರು ಮುಖಕ್ಕೆ ಬಣ್ಣ ಹಚ್ಚಿದರೆ, ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚಿಕೊಂಡಿದ್ದಾರೆ. ಕುಟುಂಬ ರಾಜಕಾರಣದ ಹೆಸರನ್ನು ಹೇಳಿ ತಮ್ಮ ಕುಟುಂಬವನ್ನು ಹೇಗೆ ರಾಜಕಾರಣಕ್ಕೆ ತರಬೇಕು ಎಂದು ಈಶ್ವರಪ್ಪರಿಗೆ ಗೊತ್ತಿದೆ. ಕಾಂತೇಶ್ಗೆ ಸಾಮರ್ಥ್ಯ ಇದ್ದಿದ್ದರೆ ಅವರ ಅಪ್ಪ ಯಾಕೆ ಇಷ್ಟು ಹೊಡೆದಾಟ ಮಾಡಬೇಕಿತ್ತು ಎಂದು ಶಿವಮೊಗ್ಗದಲ್ಲಿ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.