ತಾಯಿ, ಮಾವ ನನಗೆ ರಾಜಕೀಯ ಗುರುಗಳು
Apr 12 2024, 01:03 AM ISTಬೆಳಗಾವಿ: ನನ್ನ ತಾಯಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಮಾವ ಚನ್ನರಾಜ ಹಟ್ಟಿಹೊಳಿ ಅವರೇ ನನಗೆ ರಾಜಕೀಯ ಗುರುಗಳು ಎಂದು ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಹೇಳಿದರು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿಯಲ್ಲಿ ಗುರುವಾರ ಉಚಗಾಂವ ಭಾಗದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ನಾನು ಅವರ ಮಾರ್ಗದರ್ಶನದಲ್ಲೇ ಸಮಾಜ ಸೇವೆ ಮತ್ತು ರಾಜಕೀಯ ಮಾಡುತ್ತಿರುವೆ.